
ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ 25 ರೂಪಾಯಿಗೆ ಮಾರಾಟ: ಯಾವುದೇ ವಿತರಣಾ ಶುಲ್ಕ ಪಡೆಯದೇ ಈ ಧ್ವಜಗಳನ್ನು ತಲುಪಿಸಲಾಗುತ್ತಿದೆ
ಇ ಅಂಚೆ ಕಚೇರಿ ಪೋರ್ಟಲ್ ನಿಂದ ಆನ್ ಲೈನ್ ಮೂಲಕ ನಾಗರಿಕರು ರಾಷ್ಟ್ರಧ್ವಜ ಖರೀದಿಸಬಹುದು
ನಿಗದಿತ ಸಮಯಕ್ಕೆ ಧ್ವಜ ತಲುಪಿಸಲು ನಾಗರಿಕರು 2022 ರ ಆಗಸ್ಟ್ 12 ಮಧ್ಯರಾತ್ರಿ ಒಳಗಾಗಿ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸಬೇಕು ಎಂದು ಮನವಿ ಮಾಡಿದ ಅಂಚೆ ಇಲಾಖೆ
ದೇಶದ ಹೆಮ್ಮೆಯ ನಾಗರಿಕರಿಗೆ ಸುಲಲಿತವಾಗಿ ರಾಷ್ಟ್ರಧ್ವಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳನ್ನು 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ನಾಗರಿಕರು ಇ ಅಂಚೆ ಕಚೇರಿ ಪೋರ್ಟಲ್ ನಿಂದ ಆನ್ ಲೈನ್ ಮೂಲಕ ರಾಷ್ಟ್ರಧ್ವಜಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ ( https://www.epostoffice.gov.in/ProductDetails/Guest_productDetailsProdid=ca6wTEVyMuWlqlgDBTtyTw==).
ಅಂಚೆ ಇಲಾಖೆ ವಿತರಣಾ ಶುಲ್ಕ ಪಡೆಯದೇ ಧ್ವಜಗಳನ್ನು ದೇಶದ ಯಾವುದೇ ಭಾಗಕ್ಕೆ ವಿತರಣೆ ಮಾಡುತ್ತಿದೆ. ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸುವ ನಾಗರಿಕರು 2022 ರ ಆಗಸ್ಟ್ 12 ರ ಮಧ್ಯ ರಾತ್ರಿಯೊಳಗಾಗಿ ಮುಂಗಡ ಕಾಯ್ದಿರಿಸಿದರೆ ಸೂಕ್ತ ಸಮಯಕ್ಕೆ ವಿತರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಮನವಿ ಮಾಡಿದೆ.
Inf:PB