
ದಿನಾಂಕಃ-10-09-2022 ರಂದು ಟಿಪ್ಪುನಗರದ ಮಹಿಳೆಯೊಬ್ಬರು ಶಿವಮೊಗ್ಗ ಟೌನ್ ನ ಅಶೋಕ ಸರ್ಕಲ್ನಲ್ಲಿ ಶ್ರೀ ಮಹಮ್ಮದ್ ಗೌಸ್ ವಾಸ 2ನೇ ಕ್ರಾಸ್, ಅಣ್ಣಾ ನಗರ , ಶಿವಮೊಗ್ಗ ಟೌನ್ ಇವರ ಆಟೋವನ್ನು ಹತ್ತಿದ್ದು, ಟಿಪ್ಪುನಗರದಲ್ಲಿ ಇಳಿಯುವಾಗ ತಾವು ತಂದಿದ್ದ ಬ್ಯಾಗ್ ಅನ್ನು ಮತ್ತು ಅದರಲ್ಲಿದ್ದ 40 ಗ್ರಾಂ ತೂಕದ ಬಂಗಾರದ ಸರದ ಸಮೇತ ಆಟೋದಲ್ಲಿಯೇ ಬಿಟ್ಟು ಇಳಿದಿ ಹೋಗಿರುತ್ತಾರೆ. ನಂತರ ಮಹಮ್ಮದ್ ಗೌಸ್ ರವರು ತಮ್ಮ ಆಟೋದಲ್ಲಿದ್ದ ಬ್ಯಾಗ್ ಹಾಗೂ ಬಂಗಾರ ಸರವನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ತೋರಿದ್ದು, ಇವರ ಈ ಉತ್ತಮ್ಮ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಪ್ರಶಂಸನಾ ಪತ್ರವನವನ್ನು ನೀಡಿ ಗೌರವಿಸಲಾಯಿತು.

Inf: SDP
Sibin P S