ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು, ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ವನ್ನು ಈ ಹಿಂದೆ ನೀಡುತ್ತಿತ್ತು. ಆದರೆ ಈ ಯೋಜನೆಗೆ ನಾಗರಿಕರು ಅಷ್ಟಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಆ ಯೋಜನೆಯನ್ನು ಕೈ ಬಿಟ್ಟ ಸರ್ಕಾರ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ.
ಟೋಕಿಯೋ (Tokyo) ನಗರ ಬಿಟ್ಟು ಹೊರ ಹೋಗುವ ಜನರಿಗೆ ಜಪಾನ್ ಸರ್ಕಾರ ಲಕ್ಷ-ಲಕ್ಷ ಹಣ ಪಾವತಿಸುತ್ತಿದೆ. ಅರೇ, ನಗರ ಬಿಟ್ಟು ಹೋಗುವಂತೆ ನಾಗರಿಕರಿಗೆ ಹೇಳುತ್ತಿರೋದೇಕೆ, ಹಣ ನೀಡುತ್ತಿರುವುದೇಕೆ ಎಂಬ ಪ್ರಶ್ನೆ ಇಲ್ಲಿ ಉದ್ಭವಾಗುತ್ತಿದೆ. ಇದಕ್ಕೆ ಕಾರಣ ಇಷ್ಟೇ, ಟೋಕಿಯಾದ ಜನಸಂಖ್ಯೆ (Population). ಜಪಾನ್ ದೇಶದ ರಾಜಧಾನಿ ಟೋಕಿಯೋ ನಗರದಲ್ಲಿ (City) ಜನಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದ ಜನ ಉದ್ಯೋಗವಕಾಶಗಳ ಅರಸುತ್ತ ಮತ್ತು ಸೌಲಭ್ಯಗಳು (Benifit) ಉತ್ತಮವಾಗಿರುವ ನಗರ ಪ್ರದೇಶಗಳತ್ತ ವಲಸೆ ಬರುತ್ತಿದ್ದಾರೆ.
ಇದರಿಂದಾಗಿ ಹಳ್ಳಿ ಪ್ರದೇಶಗಳು ಜನಸಂಖ್ಯಾ ಕೊರತೆಯನ್ನು ಎದುರಿಸುತ್ತಿದ್ದರೆ ಟೋಕಿಯೋದಂತಹ ನಗರಗಳು ಜನಸಂಖ್ಯೆಯನ್ನು ಮೀರಿ ಬೆಳೆಯುತ್ತಿವೆ.
ಟೋಕಿಯೋ ತೊರೆಯುವವರಿಗೆ ಲಕ್ಷ-ಲಕ್ಷ ಹಣ
ರಾಜಧಾನಿ ಟೋಕಿಯೋ ನಗರದಲ್ಲಿ ಜನಸಂಖ್ಯೆ ಹೆಚ್ಚಿದ್ದು, ಜನರ ಒತ್ತಡವನ್ನ ಕಡಿಮೆ ಮಾಡಲು ಮತ್ತು ದೇಶದಲ್ಲಿ ಅವನತಿ ಹೊಂದುತ್ತಿರುವ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಕಡೆಗೆ ಜನರನ್ನು ಸ್ಥಳಾಂತರಿಸಲು ಸರ್ಕಾರವು ಜನರಿಗೆ ಪ್ರೋತ್ಸಾಹದಾಯಕವಾಗಿ ಹಣ ನೀಡುವ ಕ್ರಮವನ್ನು ಘೋಷಿಸಿದೆ. ಜಪಾನ್ ಸರ್ಕಾರ ಟೋಕಿಯೋ ನಗರ ಬಿಟ್ಟು ಹೊರ ಹೋಗುವಂತೆ ಮತ್ತು ಅಂತವರಿಗೆ ಹಣ ನೀಡುವ ಬಗ್ಗೆ ಯೋಜನೆಯನ್ನು ಪ್ರಕಟಿಸಿದೆ.
ಟೋಕಿಯೋದಿಂದ ಹೊರ ಹೋಗುವ ಕುಟುಂಬಗಳ ಪ್ರತಿಯೊಂದು ಮಗುವಿಗೆ ಒಂದು ಮಿಲಿಯನ್ ಯೆನ್ ( ಯೆನ್ ಜಪಾನಿನ ಹಣ, $7,700, ಭಾರತದ ರೂ. 6.26 ಲಕ್ಷ) ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ.
ಏಪ್ರಿಲ್ನಿಂದ ಯೋಜನೆ ಜಾರಿಗೆ