
ಶಕ್ತಿ ಯೋಜನೆ ಜಾರಿಯಿಂದ ಸಾರಿಗೆ ಇಲಾಖೆಗೆ ನಷ್ಟ ಎಂಬ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ಇಲಾಖೆಗೆ ನಷ್ಟ ಹೇಗಾಗುತ್ತೆ, ನಷ್ಟದ ಪ್ರಶ್ನೆಯೇ ಬರಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಆನೇಕಲ್: ಸಾರಿಗೆ ಇಲಾಖೆಗೆ ನಷ್ಟ ಹೇಗಾಗುತ್ತೆ, ನಷ್ಟದ ಪ್ರಶ್ನೆಯೇ ಬರಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಬಿಟಿಎಂಲೇಔಟ್, ಜಯನಗರ ಕ್ಷೇತ್ರದ ಮತದಾರರಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಕಲವಾರ ವೇರ್ ಹೌಸ್ನಲ್ಲಿ ಔತಣಕೂಟ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಪ್ರಯಾಣದ ಹಣವನ್ನು ಸರ್ಕಾರವೇ ಭರಿಸುತ್ತದೆ. ಉಚಿತ ಪ್ರಯಾಣದಿಂದ ಸಾರಿಗೆ ಇಲಾಖೆಗೆ ನಷ್ಟವೇನು ಇಲ್ಲ ಎಂದಿದ್ದಾರೆ.
ಉಚಿತ ಪಯಣ ಅನ್ನೋ ಕಾರಣಕ್ಕೆ ಸಹಜವಾಗಿ ಓಡಾಟ ಹೆಚ್ಚಿದೆ. ಪುಣ್ಯ ಕ್ಷೇತ್ರಗಳು, ದೇವಸ್ಥಾನಗಳಿಗೆ ಓಡಾಟ ಜಾಸ್ತಿಯಾಗಿದೆ. ಎರಡ್ಮೂರು ವಾರಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಒಂದು ವೇಳೆ ಏನಾದ್ರೂ ಜನ ಹೆಚ್ಚಾದ್ದಾರೆ. ಬಸ್ ಶೆಡ್ಯೂಲ್ಡ್ ಹೆಚ್ಚು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಲಗೇಜ್ ಹಾಗೂ ಕಂಡಕ್ಟರ್ ಜತೆ ಮಹಿಳಾ ಪ್ರಯಣಿಕರ ಕಿರಿಕ್ ವಿಚಾರವಾಗಿ ಮಾತನಾಡಿ ಅವರು, ಪ್ರಾರಂಭದ ಹಂತದಲ್ಲಿ ಇದೆಲ್ಲಾ ಸಾಮಾನ್ಯ. ಅದನ್ನು ಸರಿಪಡಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಹೌಸ್ನಲ್ಲಿ ಸಕ್ಸಸ್ ಪಾರ್ಟಿ: ಬಿಟಿಎಂಲೇಔಟ್, ಜಯನಗರ ಕ್ಷೇತ್ರದ ಮತದಾರರಿಗೆ ಬಾಡೂಟ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ ಬೆಂಗಳೂರಿನ ಬಿಟಿಎಂಲೇಔಟ್, ಜಯನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಮಾಜಿ ಶಾಸಕಿ ಸೌಮ್ಯರಿಂದ ಬಾಡೂಟ ಆಯೋಜನೆ ಮಾಡಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು, ಮಟನ್ ಬಿರಿಯಾನಿ, ಮಟನ್ ಶೇರ್ವಾ, ಗ್ರೀನ್ ಚಿಕನ್, ಚಿಲ್ಲಿ ಚಿಕನ್, ರಾಗಿಮುದ್ದೆ, ತಟ್ಟೆ ಇಡ್ಲಿ, ಪಾಯಸ, ಮೈಸೂರು ಪಾಕ್ ಭರ್ಜರಿ ಔತಣಕೂಟ ಸವಿದಿದ್ದಾರೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ, H.M.ರೇವಣ್ಣ ಸೇರಿ ಹಲವರು ಭಾಗಿ ಆಗಿದ್ದರು.
ಅಮಾವಾಸ್ಯೆ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡು
ಫ್ರೀ ಬಸ್ ಪ್ರಯಾಣ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟ ಜನರಿಂದ ತುಂಬಿದೆ. ಜಾತ್ರೆಗೆ ಸೇರುವಷ್ಟು ಜನರು ಅಮಾವಾಸ್ಯೆ ಪೂಜೆಗೆ ಸೇರಿದ್ದಾರೆ. ಸದ್ಯ ಬೆಟ್ಟದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಸೇರಿದ್ದಾರೆ. ರೂಂ ಗಳು ದತ್ತಿಯಾಗಿದ್ದರಿಂದ ದೇವಾಲಯ ಆವರಣದಲ್ಲೇ ಜನರು ಮಲಗಿದ್ದಾರೆ.

