
ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ (memories) ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ. ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಹೀಗೆ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳಿಗೆ, ಅದೆಷ್ಟೋ ಯುವಜನರಿಗೆ (Youths), ಯುವ ನಟ-ನಟಿಯರಿಗೆ (Young Actors Actress) ಯುವರತ್ನನೇ (Yuvaratna) ಸ್ಫೂರ್ತಿಯಾಗಿದ್ದಾರೆ. ಇದೀಗ ಅವರ ಜನ್ಮದಿನವನ್ನು (Birthday) ‘ಸ್ಫೂರ್ತಿ ದಿನ’ವನ್ನಾಗಿ (Inspiration Day) ಆಚರಿಸಲು ರಾಜ್ಯ ಸರ್ಕಾರ (State Government) ನಿರ್ಧರಿಸಿದೆ.
ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟ (Sandalwood Famous Actor), ಪವರ್ ಸ್ಟಾರ್ (Power Star) ಪುನೀತ್ ರಾಜ್ಕುಮಾರ್ (Puneeth Rajkumar) ದೈಹಿಕವಾಗಿ ನಮ್ಮನ್ನು ಅಗಲಿ ಸುಮಾರು 10 ತಿಂಗಳು ಆಯ್ತು. ಆದ್ರೆ ಕನ್ನಡಿಗರು, ಅದರಲ್ಲೂ ಅವರ ಅಭಿಮಾನಿಗಳು (Fans) ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಕನ್ನಡಿಗರ ಎದೆಯಲ್ಲಿ ಅಪ್ಪು (Appu) ಎಂದಿಗೂ ಜೀವಂತ. ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ (memories) ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ. ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಹೀಗೆ ಪ್ರತಿ ದಿನ ಪ್ರತಿ ಕ್ಷಣ ಅಭಿಮಾನಿಗಳಿಗೆ, ಅದೆಷ್ಟೋ ಯುವಜನರಿಗೆ (Youths), ಯುವ ನಟ-ನಟಿಯರಿಗೆ (Young Actors Actress) ಯುವರತ್ನನೇ (Yuvaratna) ಸ್ಫೂರ್ತಿಯಾಗಿದ್ದಾರೆ. ಇದೀಗ ಅವರ ಜನ್ಮದಿನವನ್ನು (Birthday) ‘ಸ್ಫೂರ್ತಿ ದಿನ’ವನ್ನಾಗಿ (Inspiration Day) ಆಚರಿಸಲು ರಾಜ್ಯ ಸರ್ಕಾರ (State Government) ನಿರ್ಧರಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟಿದ್ದು ಮಾರ್ಚ್ 17, 1975. ಪ್ರತಿ ವರ್ಷ ಅಭಿಮಾನಿಗಳು ಈ ದಿನವನ್ನು ಅಪ್ಪು ಹಬ್ಬವನ್ನಾಗಿ ಮಾಡುತ್ತಾರೆ. ಪುನೀತ್ ರಾಜ್ಕುಮಾರ್ ದೈಹಿಕವಾಗಿ ತಮ್ಮೊಡನೆ ಇರಲಿ, ಇಲ್ಲದಿರಲಿ ಅವರ ಹೆಸರಲ್ಲಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಾರೆ. ಇದೀಗ ಈ ದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ,ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ , ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬವನ್ನು ಸ್ಫೂರ್ತಿ ದಿನವಾಗಿ ಆಚರಣೆ ಮಾಡಬೇಕೆಂಬುದು ಸೇರಿದಂತೆ ಮಾಡಿದ ಮನವಿಗಳಿಗೆ ಸ್ಪಂದಿಸಿದ ಅವರು ಈ ಭರವಸೆ ನೀಡಿದ್ದಾರೆ.
Inf:N18
Sibin P S