
ಬೆಂಗಳೂರು : 6 ವರ್ಷಗಳ ಬಳಿಕ ನಟ ದರ್ಶನ್ ಮತ್ತು ಸುದೀಪ್ ಒಂದೇ ಸಮಾರಂಭದಲ್ಲಿ ಸೇರಿದ್ದು ತಮ್ಮ ಹಳೆ ವೈಮನಸ್ಸಿಗೆ ಎಳ್ಳು ನೀರು ಬಿಟ್ಟು ಒಂದಾದರಾ ಎನ್ನುವ ಅನುಮಾನುಗಳು ಈಗ ಅಭಿಮಾನಿಗಳಲ್ಲಿ ಮೂಡಿದೆ.
ಕಳೆದ ಶನಿವಾರ ಸಂಜೆ ಹಿರಿಯ ನಟಿ ಹಾಗು ಸಂಸದೆ ಸುಮಲತಾ ಅಂಬರೀಷ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಇಬ್ಬರು ಸ್ಟಾರ್ ನಟರು ಮುಖಾಮುಖಿಯಾಗಿ ಕಾಣಿಸಿಕೊಂಡಿದ್ದು ಸ್ಟಾರ್ ನಟರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿತ್ತು. ಇದರೊಂದಿಗೆ ದಚ್ಚು-ಕಿಚ್ಚನ ನಡುವಿನ ಮನಸ್ತಾಪ ಕರಗಿಹೋಯ್ತಾ? ಇಬ್ಬರ ಮುನಿಸಿಗೆ ಬ್ರೇಕ್ ಹಾಕಿದ್ರಾ ಮದರ್ ಇಂಡಿಯಾ ಸುಮಲತಾ ? ಎನ್ನುವ ಸಂಶಯ ಅಭಿಮಾನಿಗಳಲ್ಲಿ ಮನೆಮಾಡಿದೆ.
ಸಣ್ಣ ಪುಟ್ಟ ಮನಸ್ತಾಪಗಳಿಗೆ ಕಳೆದ 6 ವರ್ಷಗಳ ಹಿಂದೆ ಮಾತುಕತೆ ಇಲ್ಲದೇ ತಮ್ಮಪಾಡಿಗೆ ತಾವಿದ್ದ ನಟರು ಯಾವುದೇ ಸಭೆ ಸಮಾರಂಭಗಳಲ್ಲೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೇ, ಶನಿವಾರ ನಡೆದ ಸಂಸದೇ ಸುಮತಲಾ ಅಂಬರೀಷ್ರ 60 ನೇ ವರ್ಷದ ಜನ್ಮದಿನದ ಪೂರ್ವಭಾವಿ ಸಭೆಗೆ ಆಗಮಿಸಿದ್ದ ದಚ್ಚು-ಕಿಚ್ಚ ಒಬ್ಬರನ್ನೊಬ್ಬರು ನೋಡಿ ಕೇವಲ ಮುಗುಳ್ನಗೆ ನಗುವ ಮೂಲಕ ಸಣ್ಣ ಪುಟ್ಟ ಮನಸ್ತಾಪಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.