
ಬೆಂಗಳೂರು/Bengaluru : ರಾಜ್ಯದ ಬಹುಸಂಖ್ಯಾತ ಜನಸಮುದಾಯವನ್ನು ತಲುಪುವ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದ ಮೂಲಕ ರಾಜ್ಯ ಸರಕಾರ ಶತ ದಿನಗಳ ಸಂಭ್ರಮಕ್ಕೆ ಕಾಲಿಟ್ಟಿದೆ.
ಬೆಲೆ ಏರಿಕೆ ಹೊಡೆತದಿಂದ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದ ಜನಸಾಮಾನ್ಯರ ದುಗುಡ, ದುಮ್ಮಾನಗಳಿಗೆ ಸ್ಪಂದನೆಯ ಭರವಸೆ ತುಂಬಿರುವ ಗ್ಯಾರಂಟಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ‘ಶಕ್ತಿ’ ಯೋಜನೆಯಿಂದ ಖುಷಿಯಾಗಿರುವ ಮಹಿಳಾ ಸಮುದಾಯ ಇದೀಗ, ‘ಗೃಹ ಲಕ್ಷ್ಮಿ’ ಯನ್ನು ಎದುರು ನೋಡುತ್ತಿದೆ.
