
ಬೆಂಗಳೂರು: ‘ತಿಂಥಣಿ ಬ್ರಿಡ್ಜ್ನಲ್ಲಿರುವ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಲ್ಲಿ ಸಿದ್ಧರಾಮನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಜ. 12ರಿಂದ 1ರವರೆಗೆ ‘ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಲು ಮತಕ್ಕೆ ಸಂಬಂಧಿಸಿದ 15ಕ್ಕೂ ಹೆಚ್ಚು ಕಲಾಪ್ರಕಾರಗಳು ಸರ್ಕಾರದಿಂದ ಕಡೆಗಣನೆಗೆ ಒಳಗಾಗಿವೆ. ಆದ್ದರಿಂದ ಜ. 12ರಂದು ‘ಹಾಲುಮತ ಕಲಾವಿದರ ಮತ್ತು ಕಲಾಪ್ರಕಾರಗಳ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಎಚ್. ವಿಶ್ವನಾಥ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್ ಭಾಗವಹಿಸಲಿದ್ದಾರೆ. ರಾತ್ರಿ ‘ಸಿದ್ಧಪುರುಷ ಗಾದಿಲಿಂಗೇಶ್ವರ’ ನಾಟಕ ನಡೆಯಲಿದೆ’ ಎಂದರು.
ಜ. 13ರಂದು ಬೆಳಿಗ್ಗೆ ‘ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ’ ಮಧ್ಯಾಹ್ನ ‘ಹಾಲುಮತ ಧರ್ಮ ವೈಶಿಷ್ಟ್ಯ ಹಾಗೂ ರಾಜ್ಯ ಯುವ ಕುರುಬ ಸಂಘದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ’ವನ್ನು ಕೇಂದ್ರ ಸಚಿವ ಭಗವಂತ್ ಖೂಬಾ ಉದ್ಘಾಟನೆ ಮಾಡಲಿದ್ದಾರೆ. ಜ. 14ರಂದು ಪ್ರಶಸ್ತಿ ಪ್ರದಾನ ಮತ್ತು ಸಿದ್ಧರಾಮೇಶ್ವರ ಜಯಂತಿ’ಯನ್ನು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಉದ್ಘಾಟನೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.