
ಶ್ರೀ ಸ್ವಾಮಿ ನಾರಾಯಣ ದೇವಾಲಯ ಜಗತ್ತಿನಾದ್ಯಂತ ಸಮಾಜಕ್ಕೆ ಶ್ರೇಷ್ಠ ಸೇವೆ ಸಲ್ಲಿಸುತ್ತಿದೆ: ಶ್ರೀ ಪಿಯೂಶ್ ಗೋಯಲ್
ಸ್ವಾಮಿ ನಾರಾಯಣ ಭಗವಾನ್ ಬೋಧಿಸಿದ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಪ್ರಚುರಪಡಿಸಿದ ಮಾನವೀಯತೆ, ಆಧ್ಯಾತ್ಮಿಕತೆ ಮತ್ತು ಸಮಾಜ ಸೇವೆಯ ಆದರ್ಶಗಳು ನಮಗೆ ಸದಾ ಕಾಲ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಲೇ ಇರುತ್ತವೆ : ಶ್ರೀ ಪಿಯೂಶ್ ಗೋಯಲ್
ಬಿಎಪಿಎಸ್ ಸ್ವಾಮಿ ನಾರಾಯಣ ದೇವಸ್ಥಾನ ಜಗತ್ತಿನಾದ್ಯಂತ ಶ್ರೇಷ್ಠ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಜವಳಿ ಸಚಿವ ಸಚಿವ ಶ್ರೀ ಪಿಯೂಶ್ ಗೋಯಲ್ ಹೇಳಿದ್ದಾರೆ. ಲಾಸ್ ಎಂಜಲೀಸ್ ನಲ್ಲಿ ಶ್ರೀ ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲಾಸ್ ಎಂಜಲೀಸ್ ನಲ್ಲಿ ಸ್ವಾಮಿ ನಾರಾಯಣ ದೇವಸ್ಥಾನದ ಸೌಂದರ್ಯದ ಬಗ್ಗೆ ಅವರು ಅಭಿಮಾನ ವ್ಯಕ್ತಪಡಿಸಿದರು ಮತ್ತು ದೇವಾಲಯ ಪೂರ್ಣಗೊಂಡು ಹತ್ತು ವರ್ಷಗಳು ತುಂಬಿರುವ ಬಗ್ಗೆ ಅಭಿನಂದನೆ ಸಲ್ಲಿಸಿದ ಸಚಿವರು, ಈ ಪ್ರದೇಶದಲ್ಲಿ ಭಾರತೀಯರ ಗಮನಾರ್ಹ ಉಪಸ್ಥಿತಿ ಮತ್ತು ಲಾಸ್ ಎಂಜಲೀಸ್ ಪ್ರದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ದೇವಾಲಯದ ಉಪಸ್ಥಿತಿ ತುಂಬಾ ಸೂಕ್ತವಾಗಿದೆ ಎಂದು ಹೇಳಿದರು.
ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಜಗತ್ತಿನಾದ್ಯಂತ ಅವರ ಆಶಿರ್ವಾದ ಮತ್ತು ಅವರಿಂದ ಉತ್ತಮವಾದುದ್ದನ್ನು ಪಡೆಯಲು ನಮಗೆ ಇದು ವಿಶೇಷವಾದ ಸಂದರ್ಭವಾಗಿದೆ. ಪ್ರಮುಖ್ ಸ್ವಾಮಿ ಮಹಾರಾಜ್ ಜಿ ಅವರೊಂದಿಗೆ ಹಲವಾರು ವರ್ಷಗಳಿಂದ ವಿಶೇಷವಾದ ಬಾಂಧವ್ಯ ಹೊಂದುವ ಸುಯೋಗವನ್ನು ಹೊಂದಿದ್ದೇನೆ ಎಂದು ಶ್ರೀ ಗೋಯಲ್ ಸ್ಮರಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಮುಂಬೈನಲ್ಲಿ ಆಯೋಜಿಸಿದ್ದ ಪ್ರಮುಖ್ ಸ್ವಾಮಿ ಮಹಾರಾಜ್ ಅವರ 75 ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಳ್ಳಲು ತಮಗೆ ಅವಕಾಶ ದೊರೆತಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಜಗತ್ತಿನಾದ್ಯಂತ ಸ್ವಾಮಿ ನಾರಾಯಣ ದೇವಾಲಯಗಳಿಗೆ ಭೇಟಿ ನೀಡುವ ಸೌಭಾಗ್ಯ ತಮಗೆ ಸದಾಕಾಲ ದೊರೆಯುತ್ತಿದೆ ಎಂದು ಹೇಳಿದ ಶ್ರೀ ಗೋಯಲ್, ಲಾಸ್ ಎಂಜಲೀಸ್ ನಲ್ಲಿನ ದೇವಾಲಯ ಅತ್ಯಂತ ವಿಶಿಷ್ಟವಾಗಿದೆ ಮತ್ತು ಸುಂದರವಾಗಿ ಯೋಜನೆ ರೂಪಿಸಲಾಗಿದೆ ಹಾಗೂ ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಿದಾಗ ಧಾರ್ಮಿಕ ಅನುಭವವನ್ನು ಅನುಭವಿಸುವುದೇ ಅಸಾಧಾರಣವಾದದ್ದು ಎಂದು ಹೇಳಿದರು.
ಹಿಂದೂಗಳನ್ನು ಒಟ್ಟಿಗೆ ಇರಿಸುವಲ್ಲಿ ಮತ್ತು ಹಿಂದೂ ಧರ್ಮವನ್ನು ಪ್ರಜ್ವಲಿಸುವಂತೆ ಹಾಗೂ ಪ್ರಪಂಚದಾದ್ಯಂತ ಪಸರಿಸುವಂತೆ ಮಾಡುವಲ್ಲಿ ಬಿಎಪಿಎಸ್ ಕೊಡುಗೆ ಅಮೂಲ್ಯವಾಗಿದೆ. ಭಾರತದಿಂದ ಜನ ಹೊರ ಬಂದಾಗ ಮತ್ತು ಜೀವನದ ಭೌತಿಕ ಅಂಶಗಳನ್ನು ಅನುಭವಿಸಿದಾಗ ಮುಂದಿನ ಪೀಳಿಗೆಯು ಮಾತೃಭೂಮಿ ಸಂಪರ್ಕ ಕಳೆದುಕೊಳ್ಳುವುದನ್ನು ಗಮನಿಸಲಾಗಿದೆ ಎಂದು ಹೇಳಿದರು. ಆದರೆ ಎಲ್ಲೆಲ್ಲಿ ಸ್ವಾಮಿ ನಾರಾಯಣ ದೇವಸ್ಥಾನ ಮೂಡಿ ಬಂದಿದೆಯೋ ಅಲ್ಲೆಲ್ಲಾ ಅಧ್ಯಾತ್ಮಿಕತೆ ಅರಳುತ್ತದೆ ಮತ್ತು ಮುಂದಿನ ಪೀಳಿಗೆ ಮಾತೃಭೂಮಿಯೊಂದಿಗೆ ತನ್ನ ಸಂಪರ್ಕ ಉಳಿಸಿಕೊಳ್ಳುತ್ತದೆ. ಅವರು ತುಂಬಾ ಉತ್ತಮವಾದುದ್ದನು ಮತ್ತು ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಆದ್ದರಿಂದ ಈ ಸಂಸ್ಥೆ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸಮಾಜಕ್ಕೆ ಪರಮೋಚ್ಚ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಸ್ವಾಮಿ ನಾರಾಯಣ ಭಗವಾನ್ ಯಾವಾಗಲೂ ಮಾನವೀಯತೆ ಮತ್ತು ಧಾರ್ಮಿಕತೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವುದಕ್ಕೆ ಒತ್ತು ನೀಡುತ್ತದೆ ಎಂದು ಹೇಳಿದ ಶ್ರೀ ಗೋಯಲ್, ಈ ಬೋಧನೆಗಳು ಮಾನವೀಯತೆಗೆ ನಾವು ವಾಪಸ್ ನೀಡುವುದನ್ನು ಕೇಂದ್ರೀಕರಿಸುತ್ತದೆ. ಸ್ವಾಮಿ ನಾರಾಯಣರು ಧ್ಯಾನ, ಭಕ್ತಿ ಮತ್ತು ಶ್ರದ್ಧೆಯಂತಹ ಅದ್ಭುತ ಬೋಧನೆಗಳನ್ನು ನೀಡಿದ್ದಾರೆ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಪ್ರಚುರಪಡಿಸಿರುವ ಚಿಂತನೆಗಳು ನಮ್ಮೆಲ್ಲರಲ್ಲಿವೆ. ಅವರ ಬೋಧನೆಗಳು ಸ್ಫೂರ್ತಿಯನ್ನು ನೀಡುತ್ತಲೇ ಇರುತ್ತವೆ ಮತ್ತು ತಮ್ಮ ಬದುಕಿನಲ್ಲಿ ಸದಾ ಕಾಲ ಮಾರ್ಗದರ್ಶನ ಮಾಡುತ್ತಿರುತ್ತವೆ ಎಂದು ಶ್ರೀ ಪಿಯೂಶ್ ಗೋಯಲ್ ಹೇಳಿದರು.
Inf:PB
Sibin P S