
ಇಂದು ಸಾಗರದ ಈದ್ಗಾ ಮೈದಾನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಯುವ ಸೇನೆ ಹಾಗೂ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ನಾಲ್ಕು ವರ್ಷಗಳ ಹಿಂದೆ ನೆಟ್ಟಿದ್ದ ಗಿಡಗಳ ಪರಿವೀಕ್ಷಣೆ ನಡೆಸಿ ಸಾಗರದ ಖ್ಯಾತ ಸಾಹಿತಿ dr ನಾ ಡಿಸೋಜ ಅವರು ಮಾತಾಡಿದರು, ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು ,ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಶಿವಾನಂದ್ ಕುಗ್ವೆ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದ ರಾಜ್ಯ ಉಪಾಧ್ಯಕ್ಷ ಸುಭಾಷ್ ಚಂದ್ರ ತೇಜಸ್ವಿ, ಮಾಜಿ ಸೈನಿಕರ ಸಂಘದ ನಿರ್ದೇಶಕ ವಿಷ್ಣು ಹೆಗಡೆ, ಈದ್ಗಾ ಮೈದಾನ ಕಮಿಟಿ ಅಧ್ಯಕ್ಷ ಫಾರೂಕ್, ಹಾಗೂ ಗಿಡ ನೆಟ್ಟು ರಕ್ಷಣೆ ಮಾಡಿ ಕಾಲ ಕಾಲಕ್ಕೆ ತಕ್ಕ ಗೊಬ್ಬರ,ನೀರು ಹಾಕಿ ಗಿಡಗಳ ಸಂರಕ್ಷಕ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಯುವ ಸೇನೆಯ ಅದ್ಯಕ್ಷರಾದ ಸುಭಾಷ್ ಕೌತಳ್ಳಿ ಇದ್ದರು. ಜಾಗತಿಕ ತಾಪಮಾನ ಏರಿಕೆ ಕಾಣುತ್ತಿದ್ದು ವಾತಾವರಣದಲ್ಲಿ ಉಷ್ಣತೆ ಕಡಿಮೆ ಮಾಡಲು ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಮಾಹಿತಿ:ಸುಭಾಷ್ ಚಂದ್ರ ತೇಜಸ್ವಿ. ಸಿಬಿನ್ ಸೋಮನ್
