
ನನ್ನ ಅಪ್ಪ
ಸಾವಿರ ಸಾವಿರ ಜನುಮ ಕಳೆದರೂ ನಿನ್ನ ಪ್ರೀತಿ ನನಗೆ ಅಜರಾಮರ ಅಪ್ಪ,
ನನ್ನ ಪುಟ್ಟ ಲೋಕಕ್ಕೆ ಹಾರಲು ರೆಕ್ಕೆಯನ್ನು ಕೊಟ್ಟ ನನ್ನ ಅಪ್ಪ,
ನನಗೆ ಜೀವದಾನ ಮಾಡಿದ ಕರುಣಾಮಯಿ ನನ್ನ ಅಪ್ಪ,
ನನ್ನ ಮುಂದೆ ಎಷ್ಟೇ ಕೋಪ ತೋರಿದರು ಬೆಟ್ಟದಷ್ಟು ಪ್ರೀತಿಯನ್ನು ಮನಸ್ಸಿನಲ್ಲಿ ಬಚ್ಚಿಟ್ಟ ನನ್ನ ಅಪ್ಪ,
ತನ್ನ ಮನಸ್ಸಲ್ಲಿ ಎಷ್ಟೇ ಕಷ್ಟ ನೋವುಗಳು ಅಡಗಿದ್ದರೂ ನಾನು ಕೇಳಿದ್ದನ್ನು ಕೊಡುತ್ತಿದ್ದ ಸಿರಿವಂತ ನನ್ನ ಅಪ್ಪ,
ಅಪ್ಪ ಅಂದರೆ ನನ್ನ ಆಕಾಶ,
ಬಾನೆತ್ತರದ ನಕ್ಷತ್ರ, ತಾರೆಗಳನ್ನು ನನ್ನ ಮಡಿಲಲ್ಲಿ ತಂದಿಟ್ಟ ನನ್ನ ಅಪ್ಪ,
ತನ್ನ ಶ್ರಮ,ಧೈರ್ಯ,ನೈತಿಕತೆಯನ್ನು ನನ್ನಲ್ಲಿ ತುಂಬಿದ ನನ್ನ ಅಪ್ಪ,
ನಾನು ಕುಗ್ಗಿದಾಗ,ನರಳಿದಾಗ, ಎದೆಗುಂದಿದ್ದಾಗ, ಹುರಿದುಂಬಿಸಿದ ನನ್ನ ಅಪ್ಪ,
ಬ್ರಹ್ಮಾಂಡದ ಅತ್ಯುತ್ತಮ ವ್ಯಕ್ತಿ ನನ್ನ ಅಪ್ಪ,
ಅಪ್ಪ ಅಂದರೆ ತ್ಯಾಗದ ಆಗರ,
ನನ್ನ ದೇಗುಲದ ದೇವರು, ನನ್ನ ಅಪ್ಪ

ಐ ಲವ್ ಯು ಅಪ್ಪ
ಖುರ್ರತ್ ಉಲ್ ಆಯಿನ್.ಆರ್
ಬೆಂಗಳೂರು.