
ಸಾಗರ : ನಗರದ ಜೆಸಿ ರಸ್ತೆ ಕೆನರಾ ಬ್ಯಾಂಕ್ ಎದುರುಗಡೆ ಅಕ್ರಮವಾಗಿ ರಸ್ತೆ ಬದಿ ಹಾಗೂ ಚರಂಡಿಗೆ ಸೇರಿ ಹಣ್ಣಿನ ಅಂಗಡಿಯನ್ನು ಹಾಕಿದ್ದು, ಅದನ್ನು ನಗರ ಸಭೆ ಸಿಬ್ಬಂದಿಗಳಿಂದ ತೆರವು ಗೊಳಿಸಿದ ಸಂಬಂಧ ಬೀದಿ ಬದಿ ವ್ಯಾಪಾರಿಗಳು ಹಾಗೂ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ.

(ಪ್ರಭಾರ) ಪೌರಾಯುಕ್ತ ಹೆಚ್.ಕೆ ನಾಗಪ್ಪ ರವರಿಗೆ ಮನವಿ ನೀಡಲಾಗಿತ್ತು, ಮನವಿ ಸ್ವೀಕರಿಸಿ ಪ್ರತಿಭಟನಕಾರ ರೊಂದಿಗೆ ಮಾತನಾಡುತ್ತಿರುವಾಗ ನಗರಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪನವರ ಮೇಲೆ ಏಕಾ ಏಕಿ ಹಲ್ಲೆ ನಡೆಸಿ ಅವಾಚ್ಯಶಬ್ದಗಳಿಂದ ನಿಂದಿಸಿ ನಗರ
ಸಭೆಯೊಳಗೆ 50 ಕ್ಕೂ ಹೆಚ್ಚು ಜನರು ನುಗ್ಗಿರುವ ಕುರಿತು ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ನೀಡಿರುವ ದೂರಿ ನನ್ವಯ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ನಂ 1.ತಸ್ರೀಪ್ ಇಬ್ರಾಹಿಂ, 2.ಮೊಹಮದ್ ಜಿಲಾನಿ,
3.ಶಾಬಾಜ್ ಅಹಮದ್, 4. ವಾಸಿಂ, 5. ರಶೀದ್ ಮತ್ತು ಇತರೆ 50 ಜನರು ನಗರ ಸಭೆಯೊಳಗೆ ನುಗ್ಗಿ ಹಲ್ಲೆ ನಡೆಸಿ ನಿಂದಿಸಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ದೂರಿದ್ದಾರೆ.
5 ಮಂದಿ ಸೇರಿ ಇತರೆ 50 ಜನರ ಮೇಲೆ ಐಪಿಸಿ ಸೆಕ್ಷನ್ (IPC Section) 143, 147 ,323, 504, 506, 353, 149 ಅಡಿಯಲ್ಲಿ ಕೇಸು ದಾಖಲಾಗಿದೆ.
Sibin P Soman
