
ತಾಕತ್ತಿದ್ರೆ ಬಂದು ನಿಲ್ಲಿಸಿ ನೋಡೋಣ; ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್
ದೊಡ್ಡಬಳ್ಳಾಪುರ: ಬಿಜೆಪಿ ಜನಸ್ಪಂದನ ಸಮಾವೇಶ ನಡೀತಿದೆ. ಸರ್ಕಾರದ 3 ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷ ಬಿಜೆಪಿ ಶಕ್ತಿ ಪ್ರದಶರ್ನ ಮಾಡಿದೆ. ಇದೇ ವೇಳೆ ಮಾತಾಡಿದ ಬಸವರಾಜ ಬೊಮ್ಮಾಯಿ , ಭಾಷಣದ ಆರಂಭದಲ್ಲೇ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. 2023ಕ್ಕೆ ಮತ್ತೆ ಬಿಜೆಪಿಯ ಕಮಲ ಅರಳುತ್ತೆ ಎಂಬ ಸಂದೇಶವನ್ನು ತಾವು ಕೊಟ್ಟಿದ್ದೀರಿ ಎಂದು ಬೊಮ್ಮಾಯಿ ಹೇಳಿದ್ರು. ಯಡಿಯೂರಪ್ಪ ಅವರನ್ನು ರಾಜಹುಲಿ, ಶೋಭಾ ಕರಂದ್ಲಾಜೆ ಅವರನ್ನು ಕಿತ್ತೂರು ರಾಣಿ ಚೆನ್ನಮ್ಮ, ಸಿಟಿ ರವಿಯನ್ನು ಯುವಕರ ಫೈಯರ್ ಬ್ರಾಂಡ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ವರ್ಣಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಕಾಂಗ್ರೆಸ್ಗೆ ಅಧಿಕಾರ ಲಾಲಸೆ ಇದೆ. ಹೀಗಾಗಿ ಈ ಹಿಂದೆ ಕುತಂತ್ರದಿಂದ, ವಾಮಾ ಮಾರ್ಗದ ಮೂಲಕ ಸಿದ್ದರಾಮಯ್ಯ ಮೈತ್ರಿ ಸರ್ಕಾರ ರಚನೆ ಮಾಡಿದ್ರು. ಜೆಡಿಎಸ್ ಪಕ್ಷವನ್ನು ಬೈಕೊಂಡು ಓಡಿದಾದ ಸಿದ್ದರಾಮಯ್ಯ ನವರೇ ಎಲ್ಲಿ ಹೋಯ್ತ್ರೀ, ನಿಮ್ಮ ನೀತಿ ಹಾಗೂ, ನೈತಿಕತೆ ಎಂದು ಕಿಡಿಕಾರಿದ್ರು. ಯಾರಿಗೆ ಉಪದೇಶ ಹೇಳ್ತೀರಿ ನೀವು, ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಸಿಎಂ ಬೊಮ್ಮಾಯಿಯಿಂದ ವೀರಾವೇಷದ ಭಾಷಣ ಮಾಡಿದ್ದಾರೆ.
ಕೇಂದ್ರ ಕೊಟ್ಟ ಅಕ್ಕಿಗೆ ನೀವು ಚೀಲ ಕೊಟ್ಟಿದ್ದೀರಿ
ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ರೆ ಜನರನ್ನು ನರಕಕ್ಕೆ ತಳ್ಳುತ್ತಿದ್ರು ಅನ್ನಭಾಗ್ಯ ಕೊಟ್ಟೆ ಅಂತಾ ಹೇಳ್ತೀರಲ್ಲ. ಅಕ್ಕಿ ಕೊಟ್ಟವರು ನೀವಾ ಎಂದ ಬೊಮ್ಮಾಯಿ, ಕೇಂದ್ರ ಸರ್ಕಾರ ಕೊಡುವ ಅಕ್ಕಿಗೆ ನೀವು ಚೀಲ ಮಾತ್ರ ಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯನವರ ಮಾತಿನ ಶೈಲಿಯಲ್ಲೇ ಸಿದ್ದರಾಮಯ್ಯಗೆ ಬೊಮ್ಮಾಯಿ ಟಾಂಗ್ ಕೊಟ್ಟಿದ್ರು.
ನಿಮ್ದು 100 ಪರ್ಸೆಂಟ್ ಕಾಂಗ್ರೆಸ್ ಸರ್ಕಾರ
ಪರ್ಸೆಂಟ್ ಬಗ್ಗೆ ಮಾತಾಡ್ತೀರಾ ಇವಾಗ, ನಿಮ್ದು 100 ಪರ್ಸೆಂಟ್ ಕಾಂಗ್ರೆಸ್ ಸರ್ಕಾರ, ನೀವು ಯಾವ್ದೆ ಕೆಲಸ ಮಾಡ್ದೆ ಬರೀ ಬಿಲ್ ತೆಗೆದು ದುಡ್ಡು ಹೊಡೆಯುತ್ತಿದ್ದವರು ನೀವು, ಸಿದ್ದರಾಮಯ್ಯ ಅವರ ದುಷ್ಟಕೂಟದ ನಾಟಕಕ್ಕೆ ಕೊನೆಯಾಡಬೇಕು. ಕಾಂಗ್ರೆಸ್ ಪಕ್ಷವನ್ನು 100 ಪರ್ಸೆಂಟ್ ಕಮಿಷನ್ ಎಂದು ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು ಕೊಟ್ಟರು.
ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ನಿಲ್ಲಿಸಿ
ಕಾಂಗ್ರೆಸ್ ನವರ ಕನಸ್ಸು ಬರೀ ಕನಸ್ಸಾಗಿಯೇ ಉಳಿಯುತ್ತದೆ. ರಾಜ್ಯದ ಜನರು ನಿಮ್ಮ ಭ್ರಷ್ಟಾಚಾರ ನೋಡಿದ್ದಾರೆ. ದೊಡ್ಡಬಳ್ಳಾಪುರದಿಂದ ಶುರುವಾದ ಈ ಜನಸ್ಪಂದನ ಇಡೀ ರಾಜ್ಯಾದ್ಯಂತ ಮಾಡಿ, ಜನರ ಮೆಚ್ಚುಗೆ ಗಳಿಸುತ್ತೇವೆ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಇದನ್ನು ನಿಲ್ಲಿಸಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ಚಾಲೆಂಜ್ ಹಾಕಿದ್ದಾರೆ. ನಿಮ್ಮ ಭ್ರಷ್ಟಾಚಾರದ ಬಗ್ಗೆ ಕೆಲವೇ ದಿನಗಳಲ್ಲಿ ಬಯಲಿಗೆ ಎಳೆಯುತ್ತೇವೆ. ನಿಮ್ಮ ವಿಕೃತ ಮನಸ್ಸು ಜನರಿಗೆ ತಿಳಿಸುತ್ತೇವೆ. ನಿಮ್ ನಿಜ ಬಣ್ಣವನ್ನು ಹೊರಗೆ ಎಳೆಯುತ್ತೇವೆ. ನಿಮ್ಮ ಗೋಮುಖ ವ್ಯಾಘ್ರ ಮುಖವಾಡದ ಬಗ್ಗೆ ಬಹಿರಂಗ ಆಗುತ್ತದೆ. ಜನರು ನಿಮಗೆ ಚೀ ಥೂ ಅಂತಾರೆ ಎಂದು ಬೊಮ್ಮಾಯಿ ಹೇಳಿದ್ರು.
ಮತ್ತೆ ಗೆಲ್ತೀವಿ ಎಂದ ಯಡಿಯೂರಪ್ಪ
ಈ ಭಾಗದಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳದಿರಲಿಲ್ಲ ಆದರೆ ಸಚಿವ ಸುಧಾಕರ್ ಪರಿಶ್ರಮದಿಂದ ಈ ಭಾಗದಲ್ಲಿ ಬಿಜೆಪಿಗೆ ಶಕ್ತಿ ಬೆಳೆದಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆದ್ದು ರಾಜ್ಯದಲ್ಲಿ 150 ಸೀಟ್ ಗೆದ್ದು ಮತ್ತೆ ಸರ್ಕಾರ ರಚನೆ ಮಾಡ್ತೀವಿ. ನನ್ನ ಜೀವನದಲ್ಲಿ ಕಾಲದಲ್ಲಿ ರೈತಾಪಿ ವರ್ಗಕ್ಕೆ ಕೆಲಸ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ನಾವು ಕೊಟ್ಟ ಸೌಲಭ್ಯಗಳನ್ನು ಬೇರೆ ರಾಜ್ಯದಲ್ಲೂ ಎಲ್ಲಿಯೂ ಕೊಟ್ಟಿಲ್ಲ ಎಂದು ಯಡಿಯೂರಪ್ಪ ಹೇಳಿದ್ರು.
INF:pvn